ಬಂಟ್ವಾಳ, ಜನವರಿ 20: ಬಂಟ್ವಾಳದ ಸ್ವರ್ಣೋದ್ಯಮಿ ಸುರೆಶ್ ಬಾಳಿಗಾ ಕೊಲೆಯತ್ನದ ಆರೋಪದಲ್ಲಿ ಬಂಧಿತರಾಗಿ ಪೋಲಿಸ್ ಕಸ್ಟಡಿಯಲ್ಲಿದ್ದ ಮಹಮ್ಮದ್ ಇಕ್ಬಾಲ್ ಹಾಗೂ ಇಕ್ಬಾಲ್ ಅಹಮದ್ ನನ್ನು ಬುಧವಾರ ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಕಳೆದ ಮೂರುದಿನಗಳಿಂದ ಆರೋಪಿಗಳನ್ನು ತೀವ್ರ ವಿಚಾರಣಗೆ ಗುರಿಪಡಿಸಲಾಗಿದ್ದು, ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಹಾಗೂಕೃತ್ಯಕ್ಕೆ ಬಳಸಿದ ಬೈಕ್ ಕಳವುಮಾಡಿದ ಸ್ಥಳದ ತನಿಖೆ ನಡೆಸಲಾಗಿದೆ ಎಮದು ಪೋಲಿಸರು ತಿಳಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ಫೆ.೨ ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ,
------------------
ಭಾರತೀಯ ಸೇವಾದಲ ತಾಲೂಕು ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯವರು ಕಾವಳ ಕಟ್ಟೆ ಸರ್ಕಾರಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ನಡೆಸಿದ ತಾಲೂಕು ಮಟ್ಟದ ಭಾರತ ಸೇವಾದಲ ಮಕ್ಕಳ ಮೇಳದ ಸಮಾವೇಶದಲ್ಲಿ ಪಿಲಾತಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ, ಹಿರಿಯ ಶಾಖಾ ನಾಯಕ ಜೋನ್ ಮಾರ್ಟಿಸ್ ಅವರನ್ನು ಗಣ್ಯರು ಸನ್ಮಾಸಿದರು,
----------------
ಬಂಟ್ವಾಳ, ಜನವರಿ 20: ಹಾವು ಕಚ್ಚಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟ ಘಟನೆ ಕನ್ಯಾನ ಗ್ರಾಮದ ಶಿರಂಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ. ಇಲ್ಲಿನ ನಿವಾಸಿ ಕಮಲ (೫೮) ಮೃತ ಮಹಿಳೆ. ಕಳೆದ ಜ.೧೬ ರಂದು ಇವರಿಗೆ ವಿಷಪೂರಿತ ಹಾವು ಕಚ್ಚಿದ್ದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರಸಂಜೆ ಮೃತಪಟ್ಟಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
----------------------
ಬಂಟ್ವಾಳ, ಜನವರಿ 20: ಸ್ಯಾಂಟ್ರೋ ಕಾರಿನಲ್ಲಿ ಆಡು ಕಳವು ಗೈಯಲು ಯತ್ನಿಸುತ್ತಿದ್ದ ನಲ್ವರನ್ನು ವಿಟ್ಲ ಪೋಲಿಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಮಂಜೆಶ್ವರ ನಿವಾಸಿಗಳಾದ ನೌಶಾದ್, ಇಬ್ರಾಹಿಂ ಖಲೀಲ್,ಸಾದಿಕ್,ಅನ್ಸಾರ್ ಬಂಧಿತ ಆರೋಪಿಗಳು. ಇವರು ಮಂಗಳವಾರ ವಿಟ್ಲ ಕಸ್ಬಾ ಗ್ರಾಮದ ಕಾಂತಡ್ಕ ಎಂಬಲ್ಲಿಂದ ಆಡು ಕಳವು ಗೈದಿದ್ದು, ಸಾರ್ವ ಜನಿಕರು ನೀಡಿದ ಮಾಹಿತಿ ಮೆರೆಗೆ ತಕ್ಷಣ ಕಾರ್ಯ ಪ್ರವೃತ್ತರಾದ ಪೋಲಿಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.